02/06/2016
ಆರೋಗ್ಯ ಭಾಗ್ಯ ಯೋಜನೆಯ ವಾಸ್ತವಾಂಶ
ಆರೋಗ್ಯ ಭಾಗ್ಯ ಯೋಜನೆಯು ನಿರ್ಧರಿಸಲ್ಪಟ್ಟಂತೆ, ಪ್ರಧಾನವಾಗಿ ಸಿಜಿಹೆಚ್ಎಸ್ ದರದ ಮೇಲೆ ನಡೆಯುತ್ತಿದೆ. ಕೆಲವು ಚಿಕಿತ್ಸಾ ಪ್ರಕ್ರಿಯೆಗಳು ಸಿಜಿಹೆಚ್ಎಸ್ನಲ್ಲಿ ಸೇರಿರುವುದಿಲ್ಲ. ಇವುಗಳ ದರಗಳ ಬಗ್ಗೆ ನೋಡಲ್ ಏಜೆನ್ಸಿ ಮತ್ತು ಇಲಾಖೆಯೊಂದಿಗೆ ಪರಿಶೀಲಿಸಿ ಮರುಪಾವತಿ ಆಗದ ಮೊತ್ತದಲ್ಲಿ ಗರಿಷ್ಟ 50 ಶೇಕಡಾದಷ್ಟು ಮೊತ್ತಕ್ಕೆ ವಿಶೇಷ ಅನುಮತಿಯನ್ನು ನೀಡಲಾಗುತ್ತದೆ.
ಸ್ಟಂಟ್, ಇಂಪ್ಲಾಂಟ್, ಪೇಸ್ ಮೇಕರ್, ಲೆನ್ಸ್ ಗಳ ದರ ಸಿಜಿಹೆಚ್ಎಸ್ ನಲ್ಲಿ ನಿಗದಿಯಾಗಿದೆ. ಆದರೆ, ರೋಗಿ ಹೆಚ್ಚಿನ ದರದ ಸಾಮಾಗ್ರಿಗೆ ಬೇಡಿಕೆ ನೀಡಿದಲ್ಲಿ, ವ್ಯತ್ಯಾಸದ ಮೊತ್ತವನ್ನು ರೋಗಿಯೇ ಪಾವತಿಸಬೇಕಾಗುತ್ತದೆ. ನಿಜವಾಗಿಯೂ ಅಗತ್ಯತೆಯಿದ್ದಲ್ಲಿ ಮತ್ತು ಆಸ್ಪತ್ರೆಯವರ ಲಿಖಿತ ಬೇಡಿಕೆ ಮೇಲೆ ಎಬಿವೈ ಟ್ರಸ್ಟ್ ವ್ಯತ್ಯಾಸದ ಮೊತ್ತದ ಮೇಲೆ 50 ಶೇಕಡಾದಷ್ಟು ಮೊತ್ತವನ್ನು ಪ್ರಕರಣವಾರು ಆಧಾರದ ಮೇಲೆ ಪಾವತಿಸುತ್ತದೆ.
ಮಾಸಿಕ ವಂತಿಗೆ ಮೊತ್ತವನ್ನು ಈ ಉದ್ದೇಶಕ್ಕಾಗಿ ಹಾಗೂ ಖಾಸಗಿ ನೋಡಲ್ ಏಜೆನ್ಸಿ, ಭಾಸ್ಕೆಟ್ ಆಪ್ಸ್ನ್ ಮೂಲಕ ಈ ಯೋಜನೆಯನ್ನು ನಡೆಸಲು ಬಳಸಲಾಗುತ್ತದೆ. ಘಟಕಗಳಿಂದ ಮರುಪಾವತಿ ಬಾಕಿ ಇರುವಂತೆ ಆಸ್ಪತ್ರೆಗಳಿಗೆ ಬಿಲ್ಲುಗಳ ಮೊತ್ತವನ್ನು ಕೂಡಲೇ ಪಾವತಿ ಮಾಡಲಾಗುವುದು. ಇಂತಹ ವಿಷಮ ಪರಿಸ್ಥಿತಿ ನಿರ್ವಹಣೆಗಾಗಿ ಮೂಲಧನವನ್ನು ಬಳಸಲಾಗುತ್ತದೆ. ಮಾರ್ಚ್ 2016ರವರೆಗೆ ಆಸ್ಪತ್ರೆಗಳಿಗೆ ಪಾವತಿ ಮಾಡಲಾಗಿದೆ. ಆಸ್ಪತ್ರೆಗಳಿಗೆ ಬಿಲ್ಲು ಪಾವತಿ ಅವಧಿಯನ್ನು ಎರಡು ತಿಂಗಳಿಗೆ ಇಳಿಸಲಾಗಿದೆ.